ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ ಬಳಿಕ ಮೊಘಲ್ ಸುಲ್ತಾನರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ತಿರುಗೇಟು ನೀಡುವ ಭರದಲ್ಲಿ ಎಂಐಎಂನ ಅಸಾದುದ್ದೀನ್ ಓವೈಸಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಮೊಘಲರಿಗೆ ಭಾರತದ ಮುಸ್ಲಿಮರ ಜೊತೆ ಸಂಬಂಧವೇ ಇಲ್ಲ ಎನ್ನುವವರು.. ಮೊಘಲ್ ಸುಲ್ತಾನರ ಪತ್ನಿಯರು ಯಾರು ಎಂಬುದನ್ನು ಹೇಳಿ..? ಅಂತ ಸವಾಲು ಹಾಕಿದ್ದಾರೆ. ಇದಕ್ಕೆ ಬಿಜೆಪಿಯ ಅಮಿತ್ ಮಾಳವೀಯ ತೀಕ್ಷ್ಣವಾಗಿ ಟ್ವೀಟ್‍ನಲ್ಲೇ ತಿರುಗೇಟು ಕೊಟ್ಟಿದ್ದಾರೆ. ಓವೈಸಿ ಮುಸ್ಲಿಮ್ ಮಹಿಳೆಯರನ್ನು ಅಪಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಮುಸ್ಲಿಮ್ ಮಹಿಳೆಯರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತದೆ.
#HRRanganath #NewsCafe #PublicTV